ಅಭಿಪ್ರಾಯ / ಸಲಹೆಗಳು

ಬೆಳಗಾವಿ ಕಿರು ಪರಿಚಯ

 

 

ಕರ್ನಾಟಕದ ಭೂಪಟದಲ್ಲಿ ಬೆಳಗಾವಿ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಬೆಳಗಾವಿಯ ಮೂಲ ಹೆಸರು ವೇಣುಗ್ರಾಮ ಕಾಲಾಂತರದಲ್ಲಿ ಇದು ಬೇಳುಗ್ರಾಮ, ಬೇಳುಗಾವಿ ಆಗಿ ಇಂದಿನ ಬೆಳಗಾವಿ ಆಯಿತು. ಕದಂಬರು, ರಟ್ಟರು, ಯಾದವರು, ವಿಜಯನಗರದ ಅರಸರು, ಬಹುಮನಿಯರು, ಬಿಜಾಪುರ ಆದಿಲ್ ಶಾಹಿಗಳು, ಮೊಘಲರು, ಸವಣೂರು ನವಾಬರು, ಕೊಲ್ಲಾಪುರ ಮರಾಠರು ಮತ್ತು ಬ್ರಿಟಿಷರು ಹೀಗೆ ಬೆಳಗಾವಿಯು ಅನೇಕ ಸಾಮ್ರಾಜ್ಯಗಳ ಆಡಳಿತಕ್ಕೆ ಒಳಪಟ್ಟ ಜಿಲ್ಲೆಯಾಗಿದೆ. ಸಾಂಸ್ಕೃತಿಕವಾಗಿ ಭಾಷಿಕವಾಗಿ ಹಲವಾರು ವಿಭಿನ್ನತೆಗಳನ್ನು ಕಂಡ ಬೆಳಗಾವಿ  ಇಂದಿಗೂ ಕೂಡ ಕನ್ನಡಿಗರ ಕೆಚ್ಚುತನ, ಮರಾಠಿಗರ ಅಚ್ಚುಕಟ್ಟುತನ ಹಾಗೂ ಗೋವಾದ ಆಧುನಿಕತೆ ಎಲ್ಲವನ್ನು ಒಗ್ಗೂಡಿಸಿಕೊಂಡು ವಿಭಿನ್ನ ವೈವಿಧ್ಯತೆಗೆ ಸಾಕ್ಷಿಯಾಗಿದೆ.
2000 ವೀರಮಹಿಳೆಯರ ಸೈನ್ಯ ಕಟ್ಟಿ ದಾಖಲೆ ನಿರ್ಮಿಸಿದ ಬೆಳವಡಿಯ ವೀರರಾಣಿ ಮಲ್ಲಮ್ಮ, 18 ವರ್ಷಗಳ ಕಾಲ ಶಿರಸಂಗಿ ಸಂಸ್ಥಾನವನ್ನು ಆಳಿದ ವೀರರಾಣಿ ಶಿರಸಂಗಿ ಚೆನ್ನಮ್ಮ, ಬ್ರಿಟಿಷ್ ಸರ್ಕಾರಕ್ಕೆ ದಿಟ್ಟತನದಿಂದ ಸವಾಲೆಸೆದು ಇಡೀ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಣಕಹಳೆಯ ನಾಂದಿ ಹಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಹೀಗೆ ಬೆಳಗಾವಿಯು ಮಹಿಳಾ ವೀರಪರಂಪರೆ ಗೆ ನೀಡಿದ ಕೊಡುಗೆ ಅದ್ಭುತ ಮತ್ತು ಅಪೂರ್ವ.
ಬೆಳವಡಿ ರಾಣಿ ಮಲ್ಲಮ್ಮ ಛತ್ರಪತಿ ಶಿವಾಜಿ ಸೈನ್ಯವನ್ನು ದಿಟ್ಟತನದಿಂದ ಎದುರಿಸಿ, ಛತ್ರಪತಿ ಮಹಾರಾಜರಿಂದ 'ಸಹೋದರಿ' ಎಂದು ಪ್ರಶಂಸೆ ಪಡೆದಳು. ಅದೇ ರೀತಿ  ರಾಣಿ ಕಿತ್ತೂರು ಚೆನ್ನಮ್ಮ ಯುದ್ಧವಾಡುವ ಸಂದರ್ಭದಲ್ಲಿ ಬ್ರಿಟೀಷ್ ಕಲೆಕ್ಟರ್ ಜಾನ್ ಥ್ಯಾಕರೆಯನ್ನು ಅಮಟೂರಿನ ಶೂರ ಬಾಳಪ್ಪ ತನ್ನ ಬಂದೂಕಿನ ಗುಂಡಿಗೆ ಬಲಿ ತೆಗೆದುಕೊಂಡು ಕಿತ್ತೂರಿನ ಗೆಲುವಿನ  ವಾರಸುದಾರನಾಗಿದ್ದು, ಈ ನೆನಪಿಗಾಗಿ,  ಇಂದಿಗೂ  ರಾಜ್ಯ ಸರ್ಕಾರದ ವತಿಯಿಂದ  ಪ್ರತಿ ವರ್ಷ ಅಕ್ಟೋಬರ್ 23  ದಿನವನ್ನು ಕಿತ್ತೂರು ವಿಜಯೋತ್ಸವ ಎಂದು ವೈಭವದಿಂದ ಆಚರಿಸಲಾಗುತ್ತದೆ.
ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇವರ ಸಿಂಹ ಘರ್ಜನೆ 100 ವರ್ಷಗಳ ನಂತರ 1924 ರಲ್ಲಿ ಶ್ರೀ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಬೆಳಗಾವಿಯಲ್ಲಿ. ಶ್ರೀ ಸ್ವಾಮಿ ವಿವೇಕಾನಂದರು ತಮ್ಮ ಭಾರತ ಪರ್ಯಟನೆಯ ಕಾಲದಲ್ಲಿ ಕೆಲವು ದಿನಗಳ ಕಾಲ ಇದೇ ಬೆಳಗಾವಿಯಲ್ಲಿ ತಂಗಿದ್ದರು. ಬೆಂಗಳೂರಿನ ವಿಧಾನಸೌಧ ದಂತೆ ಅಧಿವೇಶನಗಳನ್ನು ಉತ್ತರ ಕರ್ನಾಟಕದಲ್ಲಿ ನೆರವೇರಿಸಲು ಸುವರ್ಣ ವಿಧಾನಸೌಧ ಬೆಳಗಾವಿಯ ಹೊರವಲಯದಲ್ಲಿ ಅತ್ಯಾಕರ್ಷಕವಾಗಿ ತಲೆಯೆತ್ತಿ ನಿಂತಿದೆ. ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನು ಅತಿ ವಿಜ್ರಂಭಣೆಯಿಂದ 2013 ರಲ್ಲಿ ನಡೆಸಿಕೊಟ್ಟ ಕೀರ್ತಿ ಬೆಳಗಾವಿಯ ಜಿಲ್ಲಾಡಳಿತಕ್ಕೆ ಸಲ್ಲುತ್ತದೆ.
ಕಬ್ಬು ಬೆಳಗಾವಿಯ ವಾಣಿಜ್ಯ ಬೆಳೆಯಾಗಿದ್ದು ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಇಲ್ಲಿವೆ. ಸರ್ಕಾರದ ಉತ್ತೇಜನದಂತೆ ದೇಶದಲ್ಲಿಯೇ ಸಾವಯವ ಬೆಲ್ಲವನ್ನು ಉತ್ಪಾದಿಸುವ ಕೀರ್ತಿ ಬೆಳಗಾವಿ ಜಿಲ್ಲೆಗೆ ಸಲ್ಲುತ್ತದೆ. ಸಕ್ಕರೆ ನಾಡು ಹಾಗೂ ಕುಂದಾನಗರಿ ನಮ್ಮ ಬೆಳಗಾವಿಯ ವಿಶೇಷಣಗಳು.

ಇತ್ತೀಚಿನ ನವೀಕರಣ​ : 06-05-2021 12:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080